ಪಾಲಕರು

ಸಂತ ಜೋಸೆಫರು ಹುಟ್ಟಿದ್ದು ಬೆತ್ಲೆಹೇಮಿನಲ್ಲಿ. ಯೆಹೂದ್ಯ ಸಂಪ್ರದಾಯದಂತೆ ಅವರು ಬೆಳೆದರು. ಅವರು ಯೇಸುವಿನ ತಾಯಿ ಮರಿಯಳನ್ನು ವಿವಾಹವಾಗಿ ಯೇಸುವಿನ ಪಾಲಕ ತಂದೆ ಎನಿಸಿದರು. ಯೇಸುವನ್ನು ಪ್ರಬುದ್ದ ಯುವಕನನ್ನಾಗಿ ಬೆಳೆಸುವುದರಲ್ಲಿ ಜೋಸೆಫರ ಪಾತ್ರ ಹಿರಿದು. ನೀತಿವಂತರೆನೆನಿಕೊಂಡ ವರು ಯೇಸುವಿನ ಜೀವನದ ಎಲ್ಲಾ ಸಿಹಿ-ಕಹಿ ಕ್ಷಣಗಳಲ್ಲಿ ಜೊತೆಗಿದ್ದು ಪವಿತ್ರ ಕುಟುಂಬವನ್ನು ನಡೆಸಿದರು.

ಇವರು ಯೇಸು ಮತ್ತು ಮರಿಯಳ ಸಮ್ಮುಖದಲ್ಲಿ ಮೃತರಾದರೆಂಬುದನ್ನು ಕ್ರೈಸ್ತೀಯ ಬರವಣಿಗೆಗಳು ತಿಳಿಸುತ್ತವೆ. ಆದುದರಿಂದ, ಇವರನ್ನು ಒಳ್ಳೆಯ ಮರಣದ ಪಾಲಕರು ಎಂದು ಕರೆಯಲಾಗಿದೆ. ಮಾರ್ಚ್ ‍ತಿಂಗಳನ್ನು ಸಂತ ಜೋಸೆಫರಿಗೆ ಮುಡಿಪಾಗಿಡಲಾಗಿದೆ.

9ನೇ ಭಕ್ತಿನಾಥರು ಇವರನ್ನು ಕಥೋಲಿಕ ಧರಮ಻ಸಭೆಯ ಪಾಲಕರು ಮತ್ತು ರಕ್ಷಕರು ಎಂದು ಘೋಷಿಸಿದರು. ಸಂತ ಜೋಸೆಫರು ತಂದೆಯಂದಿರ, ಕಾರ್ಮಿಕರ, ಹಲವು ಸ್ಥಳಗಳ, ಧರ್ಮಕ್ಷೇತ್ರಗಳ, ಧರ್ಮಕೇಂದ್ರಗಳ ಮತ್ತು ಇನ್ನೂ ಹಲವರ ಪೋಷಕರು ಮತ್ತು ಪಾಲಕರೂ ಆಗಿದ್ದಾರೆ.

ಶುಭಸಂದೇಶದಲ್ಲಿ ಸಂತ ಜೋಸೆಫರ ಬಗ್ಗೆ ವ್ಯಾಖ್ಯಾನ

ಕ್ರಮ ಸಂಖ್ಯೆ

ಸಂದರ್ಭ

ವ್ಯಾಖ್ಯಾನ

01

ನಜ಼ರೇತಿನಲ್ಲಿ ಜೀವಿಸಿದ ಜೋಸೆಫರು

ಲೂಕ 2:4

02

ಯೇಸುವಿನ ವಂಶಾವಳಿ

ಮತ್ತಾಯ 1:1-17ಲೂಕ 3: 23

03

ಮರಿಯಳೊಂದಿಗೆ ಜೋಸೆಫನ ನಿಶ್ಚಿತಾರ್ಥ

ಮತ್ತಾಯ 1: 18

04

ಜೋಸೆಫನಿಗೆ ದೇವದೂತರ ಸಂದರ್ಶನ (ಮೊದಲನೇ ಕನಸು)

ಮತ್ತಾಯ 1 : 20-21

05

ಬೆತ್ಲೆಹೇಮಿಗೆ ಜೋಸೆಫ ಮತ್ತು ಮರಿಯಳ ಪ್ರಯಾಣ

ಲೂಕ2 : 1- 5

06

ಯೇಸುವಿನ ಜನನದ ಪ್ರಕರಣ

ಮತ್ತಾಯ 1: 25ಲೂಕ 2 : 6-7

07

ಯೇಸುವನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಅರ್ಪಿಸಿದ್ದು

ಲೂಕ 2 : 22-24

08

ಜೋಸೆಫನಿಗೆ ದೇವದೂತನು ಈಜಿಪ್ಟಿಗೆ ಪಲಾಯನ ಮಾಡಲು ತಿಳಿಸಿದ್ದು(ಎರಡನೇ ಕನಸು)

ಮತ್ತಾಯ 2 : 13

09

ಈಜಿಪ್ಟಿಗೆ ಪಲಾಯನ

ಮತ್ತಾಯ 2 : 14-15

10

ನಜ಼ರೇತಿಗೆ ತೆರಳುವಂತೆ ದೇವದೂತನ ಆದೇಶ

ಮತ್ತಾಯ 2: 19-20

11

ಜೋಸೆಫ್ ಮತ್ತು ಕುಟುಂಬ ನಜ಼ರೇತಿನಲ್ಲಿ ನೆಲೆಸಿದ್ದು

ಮತ್ತಾಯ 2 : 21-23 ; ಲೂಕ 2 : 39

12

ಯೇಸು ದೇವಾಲಯದಲ್ಲಿ ಸಿಕ್ಕಿದ್ದು

ಲೂಕ 2 : 41-51

13

ಪವಿತ್ರ ಕುಟುಂಬ

ಯೋವಾನ್ನ 6 : 41-42