ಅಸ್ಸಿಸಿಯ ಸಂತ ಫ್ರಾನ್ಸಿಸ್‍ರ ಉಪಧರ್ಮಕೇಂದ್ರ

ಮಂಡ್ಯ ತಾಲೂಕಿನ ಹೆಚ್.‍ ಮಲ್ಲಿಗೆರೆ ಗ್ರಾಮವು ಸಂತ ಜೋಸೆಫರ ಧರ್ಮಕೇಂದ್ರಕ್ಕೆ ಸೇರಿದ್ದು ಸುಮಾರು ಹತ್ತು ಕ್ರೈಸ್ತ ಕುಟುಂಬಗಳನ್ನು ಮತ್ತು ಒಂದು ಕನ್ಯಾಸ್ತ್ರಿ ಮಠವನ್ನು ಹೊಂದಿದೆ. ಮಂಡ್ಯದಿಂದ ನಾಗಮಂಗಲಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಇರುವ ಈ ಗ್ರಾಮದಲ್ಲಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅನೇಕ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಹೊಂದುವ ಭರವಸೆಯನ್ನು ಪಡೆದಿದ್ದು, ಈ ಪ್ರದೇಶದಲ್ಲಿ ಅನೇಕ ಉದ್ಯೋಗ ಅವಕಾಶಗಳು ಮತ್ತು ಪ್ರದೇಶದ ಅಭಿವೃದ್ಧಿಯ ಅವಕಾಶಗಳು ಇವೆ. ಆದುದರಿಂದ, ಇಲ್ಲಿನ ಕ್ರೈಸ್ತ ಕುಟುಂಬಗಳಿಗೆ ಆಧ್ಯಾತ್ಮಿಕ ಸಹಾಯ ನೀಡುವುದಕ್ಕಾಗಿ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ವಂ ಕೆ ಎ ವಿಲಿಯಂರವರು

03-03-2021, ಬುಧವಾರದಂದು ಇದನ್ನು ಮಂಡ್ಯದ ಸಂತ ಜೋಸೆಫರ ಧರ್ಮಕೇಂದ್ರದ ಹೊಸ ಉಪ ಧರ್ಮಕೇಂದ್ರ ಅಸ್ಸಿಸಿಯ ಸಂತ ಫ್ರಾನ್ಸಿಸ್‍ರ ಉಪಧರ್ಮಕೇಂದ್ರ ಎಂದು ಘೋಷಿಸಿರುತ್ತಾರೆ.

ಪೂಜಾ ಸಮಯಗಳು

ಭಾನುವಾರ                           ಬೆಳಗ್ಗೆ 10-30ಕ್ಕೆ

ಮಂಗಳವಾರ-ಶನಿವಾರ            ಬೆಳಗ್ಗೆ 07-00ಕ್ಕೆ