ಮಾತೆಯ ಜಪಸರ ಪ್ರಾರ್ಥನೆ

ಜಪಸರ ಹೇಳುವ ವಿಧಾನ

ಶಿಲುಬೆಯ ಗುರುತು-ಪ್ರೇಷಿತರ ವಿಶ್ವಾಸ ಸಂಗ್ರಹ-1 ಪರಲೋಕ ಪ್ರಾರ್ಥನೆ-3 ನಮೋ ಮರಿಯ ಪ್ರಾರ್ಥನೆ-ಪರಮತ್ರಿತ್ವಕ್ಕೆ ಸ್ತೋತ್ರದ ನಂತರ ಆಯಾ ದಿನದ ರಹಸ್ಯಗಳನ್ನು ಧ್ಯಾನಿಸುವುದು.

ಪ್ರತಿ ರಹಸ್ಯದ ಕೊನೆಯಲ್ಲಿ: ಓ ನನ್ನ ಯೇಸುವೇ ನನ್ನ ಪಾಪಗಳನ್ನು ಕ್ಷಮಿಸಿರಿ, ನರಕದ ಬೆಂಕಿಯಿಂದ ನಮ್ಮನ್ನು ಕಾಪಾಡಿರಿ. ಎಲ್ಲಾ ಆತ್ಮಗಳನ್ನು ವಿಶೇಷವಾಗಿ ನಿಮ್ಮ ದಯೆಯ ಅಗತ್ಯವಿರುವ ಆತ್ಮಗಳನ್ನು ಮೋಕ್ಷರಾಜ್ಯಕ್ಕೆ ಸೇರಿಸಿಕೊಳ್ಳಿರಿ.

 ಸಂತೋಷದ ರಹಸ್ಯಗಳು (ಸೋಮವಾರ, ಶನಿವಾರ)

 1. ಗಾಬ್ರಿಯೆಲ್‍ ದೂತನು ಮರಿಯಮ್ಮನವರಿಗೆ ಮಂಗಳವಾರ್ತೆಯನ್ನು ಹೇಳಿದನು.

 2. ದೇವಮಾತೆಯು ಸಂತ ಎಲಿಜಬೇತಮ್ಮನವರನ್ನು ಸಂಧಿಸಿದರು.

 3. ಯೇಸುಸ್ವಾಮಿಯು ದನದ ಕೊಟ್ಟಿಗೆಯಲ್ಲಿ ಜನಿಸಿದರು.

 4. ಯೇಸುಬಾಲರನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಅರ್ಪಿಸಿದರು.

 5. ಮೂರು ದಿನ ಕಾಣದೇ ಹೋದ ಯೇಸುಬಾಲರು ದೇವಾಲಯದಲ್ಲಿ ಮಾತಾ ಪಿತೃಗಳಿಗೆ ಸಿಕ್ಕಿದರು.

ಜ್ಯೋತಿಯ ರಹಸ್ಯಗಳು (ಗುರುವಾರ)

 1. ಯೇಸುಸ್ವಾಮಿ ಜೋರ್ಡಾನ್‍ ನದಿಯಲ್ಲಿ ದೀಕ್ಷಾಸ್ನಾನವನ್ನು ಪಡೆದರು.

 2. ಕಾನಾ ಊರಿನ ಮದುವೆಯಲ್ಲಿ ಯೇಸು ಮೊದಲ ಸೂಚಕ ಕಾರ್ಯವನ್ನು ಮಾಡಿದರು.

 3. ಯೇಸುಸ್ವಾಮಿ ದೇವರರಾಜ್ಯವನ್ನು ಘೋಷಿಸಿದರು.

 4. ಯೇಸುಸ್ವಾಮಿ ರೂಪಾಂತರ ಹೊಂದಿದರು.

 5. ಕಡೆಯ ಭೋಜನದ ಸಮಯದಲ್ಲಿ ಯೇಸುಸ್ವಾಮಿ ಪರಮಪ್ರಸಾದವನ್ನು ಸ್ಥಾಪಿಸಿದರು.

ದುಃಖದ ರಹಸ್ಯಗಳು (ಮಂಗಳವಾರ, ಶುಕ್ರವಾರ)

 1. ಯೇಸುಸ್ವಾಮಿ ಗೆತ್ಸೆಮನಿ ತೋಪಿನಲ್ಲಿ ರಕ್ತದ ಬೆವರನ್ನು ಸುರಿಸಿದರು.

 2. ಯೇಸುವನ್ನು ಕಲ್ಲಿನ ಕಂಬಕ್ಕೆ ಕಟ್ಟಿ ಚಾಟಿಗಳಿಂದ ಹೊಡೆದರು.

 3. ಯೇಸುವಿನ ಶಿರಸ್ಸಿಗೆ ಮುಳ್ಳಿನ ಕಿರಿಟವನ್ನು ತೊಡಿಸಿದರು.

 4. ಯೇಸುಸ್ವಾಮಿ ಶಿಲುಬೆಯನ್ನು ಹೊತ್ತುಕೊಂಡು ಕಪಾಲ ಬೆಟ್ಟವನ್ನು ಹತ್ತಿದರು.

 5. ಯೇಸುಸ್ವಾಮಿ ಶಿಲುಬೆಯ ಮೇಲೆ ನಮಗಾಗಿ ಪ್ರಾಣಾರ್ಪಣೆ ಮಾಡಿದರು.

ಮಹಿಮೆಯ ರಹಸ್ಯಗಳು (ಬುಧವಾರ, ಭಾನುವಾರ)

 1. ಮೃತರಾದ ಯೇಸು ಮೂರನೇ ದಿನ ಪುನರುತ್ಥಾನರಾದರು.

 2. ಪುನರುತ್ಥಾನದ ನಂತರ ನಲ್ವತ್ತನೇ ದಿನ ಯೇಸು ಮೋಕ್ಷಕ್ಕೆ ಆರೋಹಣರಾದರು.

 3. ಪವಿತ್ರಾತ್ಮರು ಪ್ರೇಷಿತರ ಮೇಲೆ ಇಳಿದು ಬಂದರು.

 4. ದೇವಮಾತೆಯು ಸ್ವರ್ಗಸ್ವೀಕೃತರಾದರು.

 5. ದೇವಮಾತೆಯು ಸ್ವರ್ಗದ ಹಾಗೂ ಸಕಲ ಸಂತರ ರಾಣಿಯಾಗಿ ಕಿರೀಟಧಾರಿಣಿಯಾದರು.

ಮಾತೆಯ ಮನವಿಮಾಲೆ

ಸ್ವಾಮೀ ದಯೆತೋರಿ

ಕ್ರಿಸ್ತರೇ ದಯೆತೋರಿ

ಸ್ವಾಮೀ ದಯೆತೋರಿ

ಕ್ರಿಸ್ತರೇ ನಮ್ಮನ್ನು ಆಲೈಸಿರಿ

ಕ್ರಿಸ್ರರೇ ನಮ್ಮ ಪ್ರಾರ್ಥನೆಯನ್ನು ಚೆನ್ನಾಗಿ ಆಲೈಸಿರಿ

ಪರಲೋಕದ ಪಿತ ದೇವರೇ, ನಮಗೆ ದಯೆತೋರಿ

ಲೋಕ ರಕ್ಷಕರಾದ ಸುತ ದೇವರೇ, ನಮಗೆ ದಯೆತೋರಿ

ಪವಿತ್ರಾತ್ಮ ದೇವರೇ, ನಮಗೆ ದಯೆತೋರಿ

ಪರಮತ್ರಿತ್ವರಾದ ಏಕದೇವರೇ, ನಮಗೆ ದಯೆತೋರಿ.

ಸಂತ ಮರಿಯಮ್ಮನವರೇ, ನಮಗಾಗಿ ಪ್ರಾರ್ಥಿಸಿರಿ.

ದೇವರ ಪರಿಶುದ್ಧ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಕನ್ನಿಕೆಯರಲ್ಲಿ ಮಹಾ ಪರಿಶುದ್ಧ ಕನ್ನಿಕೆಯೇ, ನಮಗಾಗಿ ಪ್ರಾರ್ಥಿಸಿರಿ.

ಕ್ರಿಸ್ತರ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಧರ್ಮಸಭೆಯ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ದಯೆಯ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ದೇವಪ್ರಸಾದದ ತಾಯೇ, ನಮಗಾಗಿ ಪ್ರಾರ್ಥಿಸಿರಿ

ನಂಬಿಕೆಯ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಅತಿ ಪರಿಶುದ್ಧ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಅತಿ ವಿರಕ್ತಳಾದ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ನಿರ್ಮಲವಾದ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಕನ್ಯತ್ವವನ್ನು ಕುಂದಿಸದ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಪ್ರೀತಿಗೆ ಪಾತ್ರಳಾದ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಆಶ್ಚರ್ಯಕರ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಒಳ್ಳೆಯ ಆಲೋಚನೆಯ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಸೃಷ್ಟಿಕರ್ತರ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ರಕ್ಷಕರ ತಾಯೇ, ನಮಗಾಗಿ ಪ್ರಾರ್ಥಿಸಿರಿ.

ಅತಿ ಬುದ್ದಿವಂತೆಯಾದ ಕನ್ನಿಕೆಯೇ, ನಮಗಾಗಿ ಪ್ರಾರ್ಥಿಸಿರಿ.

ಪೂಜ್ಯಳಾದ ಕನ್ನಿಕೆಯೇ, ನಮಗಾಗಿ ಪ್ರಾರ್ಥಿಸಿರಿ.

ಸ್ತುತ್ಯಳಾದ ಕನ್ನಿಕೆಯೇ, ನಮಗಾಗಿ ಪ್ರಾರ್ಥಿಸಿರಿ.

ಶಕ್ತಿಯುಳ್ಳ ಕನ್ನಿಕೆಯೇ, ನಮಗಾಗಿ ಪ್ರಾರ್ಥಿಸಿರಿ.

ದಯಾಮಯ ಕನ್ನಿಕೆಯೇ, ನಮಗಾಗಿ ಪ್ರಾರ್ಥಿಸಿರಿ.

ಪ್ರಾಮಾಣಿಕ ಕನ್ನಿಕೆಯೇ, ನಮಗಾಗಿ ಪ್ರಾರ್ಥಿಸಿರಿ.

ನೀತಿಯ ಕನ್ನಡಿಯೇ, ನಮಗಾಗಿ ಪ್ರಾರ್ಥಿಸಿರಿ.

ಜ್ಞಾನದ ಪೀಠವೇ, ನಮಗಾಗಿ ಪ್ರಾರ್ಥಿಸಿರಿ.

ನಮ್ಮ ಸಂತೋಷದ ಬುಗ್ಗೆಯೇ, ನಮಗಾಗಿ ಪ್ರಾರ್ಥಿಸಿರಿ.

ಆಧ್ಯಾತ್ಮಿಕ ಪಾತ್ರೆಯೇ, ನಮಗಾಗಿ ಪ್ರಾರ್ಥಿಸಿರಿ.

ಮಹಿಮಾಭರಿತ ಪಾತ್ರೆಯೇ, ನಮಗಾಗಿ ಪ್ರಾರ್ಥಿಸಿರಿ.

ಅತ್ಯಂತ ಭಕ್ತಿಯುಳ್ಳ ಪಾತ್ರೆಯೇ, ನಮಗಾಗಿ ಪ್ರಾರ್ಥಿಸಿರಿ.

ಗಹನವಾದ ರೋಜಾ ಪುಷ್ಪವೇ, ನಮಗಾಗಿ ಪ್ರಾರ್ಥಿಸಿರಿ.

ಚಿನ್ನದ ಆಲಯವೇ, ನಮಗಾಗಿ ಪ್ರಾರ್ಥಿಸಿರಿ.

ದಾವೀದನ ಉಪ್ಪರಿಗೆಯೇ, ನಮಗಾಗಿ ಪ್ರಾರ್ಥಿಸಿರಿ.

ದಂತದ ಉಪ್ಪರಿಗೆಯೇ, ನಮಗಾಗಿ ಪ್ರಾರ್ಥಿಸಿರಿ.

ಒಡಂಬಡಿಕೆಯ ಪೆಟ್ಟಿಗೆಯೇ, ನಮಗಾಗಿ ಪ್ರಾರ್ಥಿಸಿರಿ.

ಮೋಕ್ಷದ ಬಾಗಿಲೇ ನಮಗಾಗಿ ಪ್ರಾರ್ಥಿಸಿರಿ.

ಉದಯ ಕಾಲದ ನಕ್ಷತ್ರವೇ, ನಮಗಾಗಿ ಪ್ರಾರ್ಥಿಸಿರಿ.

ವ್ಯಾಧಿಸ್ಥರಿಗೆ ಆರೋಗ್ಯವೇ, ನಮಗಾಗಿ ಪ್ರಾರ್ಥಿಸಿರಿ.

ಪಾಪಿಗಳಿಗೆ ಶರಣೇ, ನಮಗಾಗಿ ಪ್ರಾರ್ಥಿಸಿರಿ.

ವಲಸಿಗರಿಗೆ ಸಾಂತ್ವನವೇ, ನಮಗಾಗಿ ಪ್ರಾರ್ಥಿಸಿರಿ.

ಕಷ್ಟಪಡುವವರಿಗೆ ಉಪಶಮನವೇ, ನಮಗಾಗಿ ಪ್ರಾರ್ಥಿಸಿರಿ.

ಕ್ರೈಸ್ತರಿಗೆ ಸಹಾಯವೇ, ನಮಗಾಗಿ ಪ್ರಾರ್ಥಿಸಿರಿ.

ದೇವದೂತರ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಪಿತಾಪಿತೃಗಳ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಪ್ರವಾದಿಗಳ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಪ್ರೇಷಿತರ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ರಕ್ತಸಾಕ್ಷಿಗಳ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಧರ್ಮಸಾಕ್ಷಿಗಳ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಕನ್ನಿಕೆಯರ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಸಕಲ ಸಂತರ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಜನ್ಮ ಪಾಪವಿಲ್ಲದೆ ಉದ್ಭವಿಸಿದ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಸ್ವರ್ಗರೋಹಣವಾದ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಜಪಮಾಲೆಯ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಕುಟುಂಬಗಳ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಸಮಾಧಾನದ ರಾಣಿಯೇ, ನಮಗಾಗಿ ಪ್ರಾರ್ಥಿಸಿರಿ.

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ, ನಮ್ಮನ್ನು ಕ್ಷಮಿಸಿರಿ, ಸ್ವಾಮಿ

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ, ನಮ್ಮ ಪ್ರಾರ್ಥನೆಯನ್ನು ಚೆನ್ನಾಗಿ ಆಲೈಸಿರಿ ಸ್ವಾಮಿ

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ, ನಮಗೆ ದಯೆತೋರಿ ಸ್ವಾಮಿ

ಶ್ಲೋಕ:  ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ,

ಪ್ರತಿಶ್ಲೋಕ:  ಪರಿಶುದ್ಧ ದೇವಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.

ಪ್ರಾರ್ಥಿಸೋಣ:

ಪ್ರಭುವಾದ ದೇವರೇ, ಸದಾ ಕನ್ನಿಕೆಯಾದ ಸಂತ ಮರಿಯಮ್ಮನವರ ಬಿನ್ನಹಗಳ ಮೂಲಕ, ನಿಮ್ಮ ದಾಸರಾದ ನಾವು ಮಾನಸಿಕ ಹಾಗೂ ಶಾರೀರಿಕ ಆರೋಗ್ಯದಿಂದಿರುವಂತೆಯೂ, ಇಹದ ಕಷ್ಟಗಳಿಂದ ಬಿಡುಗಡೆಯಾಗಿ, ಪರದ ನಿತ್ಯಾನಂದವನ್ನು ಸವಿಯುವಂತೆಯೂ ಅನುಗ್ರಹಿಸಿರಿ. ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.